Home / ರಾಜ್ಯ / ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಮತ್ತೊಂದು ಮಹತ್ವದ ಹೆಜ್ಜೆ ಶಾಸಕರಾದ ಕೆ.ಎನ್. ರಾಜಣ್ಣ ಅವರು ಐ.ಡಿ.ಹಳ್ಳಿ ಹೋಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಮತ್ತೊಂದು ಮಹತ್ವದ ಹೆಜ್ಜೆ ಶಾಸಕರಾದ ಕೆ.ಎನ್. ರಾಜಣ್ಣ ಅವರು ಐ.ಡಿ.ಹಳ್ಳಿ ಹೋಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮಧುಗಿರಿ ವಿಧಾನಸಭಾ ಕ್ಷೇತ್ರ ಐ.ಡಿ.ಹಳ್ಳಿ ಹೋಬಳಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳ ವಿವರ.

  • ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ದೊಡ್ಡಯಲ್ಕೂರು, ದಾದಗೊಂಡನಹಳ್ಳಿ, ತಿಪ್ಪಾಪುರ, ಅಡವಿನಾಗೇನಹಳ್ಳಿ, ಸಿಂಗನಹಳ್ಳಿ, ತೆರಿಯೂರು, ಕಡಗತ್ತೂರು ಆಂಧ್ರಗಡಿ ಸೇರುವ ರಸ್ತೆಯ ಕಿ.ಮೀ 0.75 ರಿಂದ 14.00 ಕಿ.ಮೀ ರವರೆಗೆ ಆಯ್ದ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ.
  • ಐ.ಡಿ.ಹಳ್ಳಿ ಹೋಬಳಿಯ ತಿಪ್ಪಾಪುರ ಗ್ರಾಮದಲ್ಲಿ ಶ್ರೀ ಕನಕ ಸಮುದಾಯ ಭವನ ಉದ್ಘಾಟನೆ.
  • ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ದಾದಗೊಂಡನಹಳ್ಳಿ ಜಿ.ಎಲ್.ಪಿ.ಎಸ್ ಶಾಲೆಯ ನೂತನ ಕೊಠಡಿ ಕಟ್ಟಡ ನಿರ್ಮಾಣ ಗುದ್ದಲಿ ಪೂಜೆ.
  • ಐ.ಡಿ.ಹಳ್ಳಿ ಗ್ರಾಮದ ವಿ.ಎಸ್.ಎಸ್.ಎನ್ ಕಛೇರಿಗೆ ಭೇಟಿ ನೀಡಿ ಐ.ಡಿ.ಹಳ್ಳಿ ಗ್ರಾಮದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಿದೆನು.

ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರಾದ ಜಿ.ಜೆ.ರಾಜಣ್ಣನವರು, ತುಮುಲ್ ನಿರ್ದೇಶಕರಾದ ನಾಗೇಶ್ ಬಾಬುರವರು, ತುಂಗೋಟಿ ರಾಮಣ್ಣನವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಯ್ಯನವರು, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪನವರು, ತಹಸೀಲ್ದಾರ್ ಶ್ರೀನಿವಾಸ್‌ ಅವರು, ಇ.ಓ ಲಕ್ಷಣ್ ಅವರು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಇಂದಿರಾ ದೇನಾ ನಾಯಕ್ ಅವರು ಸೇರಿದಂತೆ ಸ್ಥಳೀಯ ಮುಖಂಡರುಗಳು, ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ವರದಿ. ಹರೀಶ ಸಿಎ

Leave a Reply

Your email address will not be published. Required fields are marked *