ವಾಷಿಂಗ್ಟನ್ ಡಿಸಿ: ಯುಎಸ್ ಸುಪ್ರೀಂಕೋರ್ಟ್ ತಮ್ಮ ಜಾಗತಿಕ ಸುಂಕಗಳನ್ನು ಕಾನೂನುಬಾಹಿರವೆಂದು ತೀರ್ಪು ನೀಡಿದ ನಂತರ ಶ್ವೇತಭವನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ತೀರ್ಪನ್ನು “ತೀವ್ರ ನಿರಾಶಾದಾಯಕ” ಎಂದು ಹೇಳಿದ್ದಾರೆ. ಅಲ್ಲದೇ ತೀರ್ಪಿನಲ್ಲಿ ಭಾಗಿಯಾಗಿರುವ ನ್ಯಾಯಾಧೀಶರ ಮೇಲೆ ವಾಗ್ದಾಳಿ ನಡೆಸಿದ ಅವರು, “ನಮ್ಮ ದೇಶಕ್ಕೆ ಸರಿಯಾದದ್ದನ್ನು ಮಾಡಲು ಧೈರ್ಯವಿಲ್ಲದ ನ್ಯಾಯಾಲಯದ ಕೆಲವು ಸದಸ್ಯರ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ” ಎಂದು ಹೇಳಿದ್ದಾರೆ.










