Home / ರಾಜ್ಯ / ರಾಜ್ಯದ ಅಣೆಕಟ್ಟುಗಳಲ್ಲಿ ಉತ್ತಮ ನೀರಿನ ಸಂಗ್ರಹ: KRSನಲ್ಲಿ 38 ಟಿಎಂಸಿ ಲಭ್ಯ, ಬೆಂಗಳೂರಿಗಿಲ್ಲ ಆತಂಕ, ತುಂಗಭದ್ರಾ ಡ್ಯಾಂ ವಿವರ?

ರಾಜ್ಯದ ಅಣೆಕಟ್ಟುಗಳಲ್ಲಿ ಉತ್ತಮ ನೀರಿನ ಸಂಗ್ರಹ: KRSನಲ್ಲಿ 38 ಟಿಎಂಸಿ ಲಭ್ಯ, ಬೆಂಗಳೂರಿಗಿಲ್ಲ ಆತಂಕ, ತುಂಗಭದ್ರಾ ಡ್ಯಾಂ ವಿವರ?

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲು ಆವರಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಈ ಅವಧಿಯಲ್ಲಿ ನೀರಿನ ಹಾಹಾಕಾರ ಶುರುವಾಗುತ್ತದೆ. ಆದರೆ ಈ ವರ್ಷ ಪರಿಸ್ಥಿತಿ ಹಿಂದಿನ ವರ್ಷಗಳಂತೆ ಇಲ್ಲ, ಉತ್ತಮವಾಗಿದೆ ಎನ್ನುವುದು ಖುಷಿಯ ವಿಷಯ. ಏಕೆಂದರೆ ಕಳೆದ ವರ್ಷ (2025) ಸುರಿದ ಉತ್ತಮ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ ನದಿ ಹಾಗೂ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ, ಒಳ-ಹೊರ ಹರಿವು ಮಾಹಿತಿ ಇಲ್ಲಿದೆ.

ಕಾವೇರಿ ನದಿ ಹಾಗೂ ಕೆಆರ್‌ಎಸ್ ಡ್ಯಾಂಗಳಲ್ಲಿ ನೀರು ಸಂಗ್ರಹ ಉತ್ತಮ ಸ್ಥಿತಿಯಲ್ಲಿರುವ ಕಾರಣ, ಮಂಡ್ಯ, ಮೈಸೂರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೇ ತಿಂಗಳ ವರೆಗೂ ಕುಡಿಯಲು, ನೀರಾವರಿಗೆ ನೀರಿನ ಲಭ್ಯತೆ ಇದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ನೀರಿನ ಅಭಾವ ಸ್ಥಿತಿ ಉಂಟಾಗುತ್ತದೋ ಅಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಿದೆ. ಇನ್ನೂ ಕೆಆರ್‌ಎಸ್ ಡ್ಯಾಂ ಒಂದು ತಿಂಗಳ ಮಳೆಗೆ ಅವಧಿಗೂ ಮುನ್ನವೇ ಭರ್ತಿಯಾಗಿತ್ತು. ಒಟ್ಟು ಎರಡು ಭಾರಿ ತುಂಬಿ ಹರಿದಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *