ಮಧುಗಿರಿ: ಹಲವಾರು ಗ್ರಾಮೀಣ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಮಟ್ಟದ ಹುದ್ದೆಗಳು ಗಿಟ್ಟಿಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ವಿವಿಧ ಸವಲತ್ತು ವಿತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸುಮಾರು ೧೪೦ ಕೋಟಿ ಜನಸಂಖ್ಯೆ ಇದ್ದು, ಪ್ರತಿಯೊಬ್ಬರಿಗೂ ಉಸಿರಾಡಲು ಆಮ್ಲಜನಕ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಇಲ್ಲಿನ ಆಧಿಕಾರಿಗಳು, ಸ್ಥಳೀಯರು ಶಾಲೆಗಳ ಆವರಣಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿದಾಗ ಮಾತ್ರ ಉತ್ತಮ ಆಮ್ಲಜನಕ ದೊರೆಯಲು ಸಾಧ್ಯ ಎಂದು ಹೇಳಿದರು.
ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈಗಾಗಲೇ ಅರಣ್ಯ ಇಲಾಖೆಯವರಿಗೆ ಸಸಿ ನೆಡಲು ತಿಳಿಸಲಾಗಿದ್ದು, ಉತ್ತಮ ನೆರಳನ್ನು ನೀಡುವಂತಹ ಗಿಡಗಳನ್ನು ಬೆಳೆಸಿದಾಗ ಅದು ನಮಗೆ ನೆರಳು ನೀಡುವುದರ ಜೊತೆಗೆ ಉತ್ತಮ ಗಾಳಿ ನೀಡುತ್ತದೆ ಎಂದರು.
ಮುಂದಿನ ಮಳೆಗಾಲದಲ್ಲಿ ಇಲ್ಲಿಯೇ ಸಸಿಯನ್ನು ನೆಡುವ ಮೂಲಕ ಕ್ಷೇತ್ರೋತ್ಸವವನ್ನು ಇಲ್ಲಿಯೇ ಆಚರಿಸೋಣಾ. ತಾಲೂಕಿನಾದ್ಯಂತ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಇಲ್ಲಿಂದಲೇ ಚಾಲನೆ ನೀಡೋಣ ಎಂದು ಹೇಳಿದರು.

ಈ ಶಾಲೆಯಲ್ಲಿ ಕಲಿತ ಮಕ್ಕಳು ಪಟ್ಟಣದ ಮಕ್ಕಳಿಗಿಂತ ಏನು ಕಡಿಮೆ ಇಲ್ಲದ ಹಾಗೆ ಉತ್ತಮವಾದ ಫಲಿತಾಂಶವನ್ನು ತರುವುದರ ಜೊತೆಗೆ ಉನ್ನತ ಮಟ್ಟದಲ್ಲಿ ಉತ್ತಮವಾದಂತಹ ಹುದ್ದೆಯಲ್ಲಿರುವುದು ಶ್ಲಾಘನೀಯ. ಪ್ರತಿಯೊಬ್ಬರು ಸಹ ತಮ್ಮ ಊರಿನಲ್ಲಿ ಜನಿಸಿದ ಋಣ ತೀರಿಸುವಂತಹ ಆಶಾಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು ನಾವು ಓದಿದ ಶಾಲೆಯನ್ನು ಮರೆಯಬಾರದು ನಮ್ಮ ರೀತಿಯೇ ಮಕ್ಕಳೂ ಸಹ ಮುಂದಿನ ದಿನಮಾನಗಳಲ್ಲಿ ಉತ್ತಮ ಪ್ರಜೆಗಳಾಗಬೇಕೆನ್ನುವ ಆಶಯವನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಶಾಲೆಯು ಸ್ವತಂತ್ರ್ಯಪೂರ್ವ ಕಾಲದ ಇತಿಹಾಸವನ್ನು ಹೊಂದಿರುವಂತಹ ಶಾಲೆಯಾಗಿದ್ದು. ಶಾಲೆಗೆ ಅಗತ್ಯಮೂಲಭೂತ ಸೌಕರ್ಯಗಳನ್ನು ಒದಗಿಸಿ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸಿ ಗೊಟೂರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ಬಿಇಓ ಹನುಮಂತರಾಯಪ್ಪ, ಅಕ್ಷರ ದಾಸೋಹದ ನಿರ್ದೇಶಕ ಚಿತ್ತಪ್ಪ, ಇಓ ಲಕ್ಷ್ಮಣ್, ಎಡಿ ಧನಂಜಯ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಮುಖಂಡ ಮಲ್ಲಿಕಾರ್ಜುನಯ್ಯ, ರಮೇಶ್ ಕನಕದಾಸ್, ಎಇಇ ಮಂಜುನಾಥ್, ಲೋಕೇಶ್ವರಪ್ಪ, ಮಾಯಕಣ್ಣನಾಯ್ಕ್, ಡಿವೈಎಸ್ಪಿ ಮಂಜುನಾಥ್, ಪಿಡಿಓಗಳಾದ ರಜನಿ, ಲಕ್ಷಣ್, ಕುಮಾರಸ್ವಾಮಿ, ಗುತ್ತಿಗೆದಾರರಾದ ನಾಗರಾಜು ಶ್ರೀನಿವಾಸ್, ಪುಟ್ಟಸ್ವಾಮಿ, ಬಸವರಾಜು ಹಾಗೂ ಇತರೆ ಮುಖಂಡರು ಇದ್ದರು.














