Home / ರಾಜ್ಯ / ಕೆರೆಯಲ್ಲಿ ದುರಂತ – ತಮ್ಮನ ಜೀವ ಉಳಿಸಲು ಹೋದ ಅಕ್ಕ ಸೇರಿ ಇಬ್ಬರು ಬಲಿ

ಕೆರೆಯಲ್ಲಿ ದುರಂತ – ತಮ್ಮನ ಜೀವ ಉಳಿಸಲು ಹೋದ ಅಕ್ಕ ಸೇರಿ ಇಬ್ಬರು ಬಲಿ

ಮಧುಗಿರಿ, ಏಪ್ರಿಲ್ 26: ಮಧುಗಿರಿ ತಾಲ್ಲೂಕಿನ ಕಸಪುರ ಗ್ರಾಮದ ಮಿಡಿಗೇಶಿ ಧೊಡ್ಡ ಕೆರೆಯ ಅಂಗಳದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ರವಿನಂದನ್ ಎಂಬ ಬಾಲಕ ನೀರು ಕುಡಿಯಲು ಕೆರೆಗೆ ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲೇ ತಮ್ಮನನ್ನು ರಕ್ಷಿಸಲು ಧಾವಿಸಿದ ಅಕ್ಕ ಸುಚಿತ್ರ, ಆತನನ್ನು ಉಳಿಸುವ ಪ್ರಯತ್ನದಲ್ಲಿ ತಾನೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ದುರ್ಘಟನೆಯಲ್ಲಿ ಇಬ್ಬರೂ ಮೃತಪಟ್ಟಿರುವುದು ಗ್ರಾಮಸ್ಥರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಕೆರೆಯ ಅಂಚು ಅತ್ಯಂತ ಜಾರುವಂತಿದ್ದು ಯಾವುದೇ ಸುರಕ್ಷತಾ ಕ್ರಮಗಳಿಲ್ಲದಿರುವುದು ಅಪಾಯಕ್ಕೆ ಕಾರಣವಾಗಿದೆ. ರವಿನಂದನ್ ಕೆರೆಯ ಬಳಿಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಆತ ಮುಳುಗುತ್ತಿರುವುದನ್ನು ಕಂಡ ಸುಚಿತ್ರ ತಕ್ಷಣವೇ ನೀರಿಗೆ ಇಳಿದು ರಕ್ಷಿಸಲು ಮುಂದಾಗಿದ್ದಾಳೆ. ಆದರೆ ನೀರಿನ ಆಳ ಹಾಗೂ ಜಾರುವ ಪರಿಸ್ಥಿತಿ ಇಬ್ಬರಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಸ್ಥಳೀಯರು ಸಹಾಯಕ್ಕೆ ಧಾವಿಸುವಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ರೋದನ ಮನಕಲುಕುವಂತಿದೆ. ತಮ್ಮನನ್ನು ಉಳಿಸಲು ಹೋದ ಅಕ್ಕನ ತ್ಯಾಗ ಗ್ರಾಮಸ್ಥರ ಕಣ್ಣೀರಿಗೂ ಕಾರಣವಾಗಿದೆ. ವರದಿ ಹರೀಶ್ ಸಿ ಎ

Leave a Reply

Your email address will not be published. Required fields are marked *